ನಾನು ಒಬ್ಬ ತಿರುಕ ಬಹಳ ವರ್ಷಗಳಿಂದ ಒಬ್ಬ ಸಾಮಾನ್ಯ ಸಾದುವಾಗಿ ಹಳ್ಳಿಯಿಂದ ಹಳ್ಳಿಗೆ ಸಂಚಾರ ಮಾಡುತ್ತಾ ಮದ್ಯಪಾನ ಧೂಮಪಾನ ವಿಚಾರ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುತ್ತೇನೆ ಎಷ್ಟೊ ಕಡೆ ಜಾಗೃತಿ ಮೂಡಿಸಲು ಹೋಗಿ ನಾನೇ ತೊಂದರೆಗೆ ಒಳಗಾಗಿದ್ದೇನೆ ಆದರೂ ಅದು ನನ್ನ ಕಾಯಕ ನಾನು ಜನಜಾಗೃತಿಯನ್ನು 25 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ ನನ್ನ ಸೇವೆಯನ್ನು ಗುರುತಿಸಿದ ಗ್ರಾಮೀಣ ಪ್ರದೇಶದ ಜನರು ಬಂದು ತುಂಬಾ ಪ್ರೀತಿಯಿಂದ ಕಾಣುತ್ತಾರೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ನನ್ನ ಆಶ್ರಮವು ಮೈಸೂರು ಜಿಲ್ಲೆಯ ಕಸಬಾ ರಮನಹಳ್ಳಿ ಎಂಬ ಒಂದು ಗ್ರಾಮ ಇಲ್ಲಿ 2000 ಮನೆಗಳಿವೆ ನಾನು ಊರಿನ ಹೊರಭಾಗದಲ್ಲಿ ಒಂದು ಸಣ್ಣ ಕುಟೀರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ ಬಹಳಷ್ಟು ಜನ ತನ್ನ ಸಮಸ್ಯೆಯನ್ನು ಹೇಳಿಕೊಂಡು ಬರುತ್ತಾರೆ ಅವರಿಗೆ ಬುದ್ಧನ ಜಾತಕ ಕಥೆಗಳು ಬಸವಣ್ಣನವರ ವಚನಗಳು ದಾಸರ ಕೀರ್ತನೆಗಳು ಮುಂತಾದವುಗಳ ಮೂಲಕವಾಗಿ ಸಮಾಧಾನ ಮಾಡುತ್ತೇನೆ ಪ್ರತಿ ವರ್ಷಕ್ಕೊಮ್ಮೆ ಇಲ್ಲಿ ಜನಗಳು ಸಮಾವೇಶಗೊಳ್ಳುತ್ತಾರೆ ಎಲ್ಲ ಧರ್ಮದ ಎಲ್ಲ ಸಮುದಾಯಗಳ ಜನರು ಬಂದು ಭೋಜನ ಸ್ವೀಕರಿಸಿ ಸಂತೋಷದಿಂದ ಹೋಗುತ್ತಾರೆ ಮಠದಲ್ಲಿ ಸೇವೆ ಮಾಡುತ್ತಾರೆ ಇದರಿಂದ ನನ್ನ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ ಸುಮಾರು 15 ವರ್ಷಗಳಿಂದ ಸೇವೆ ಮಾಡುತ್ತಾ ಜನರು ಕೊಟ್ಟಂತಹ ಪ್ರಸಾದವನ್ನು ಸ್ವೀಕಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದೇನೆ ಎಲ್ಲರಿಗೂ ಒಳ್ಳೆಯದಾಗಲೆಂದು ಈ ಸೃಷ್ಟಿಯಲ್ಲಿ ಬೇಡುತ್ತೇನೆ ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರೂ ಸಂತೋಷವಾಗಿರಿ ಎಲ್ಲರೂ ಸುಖವಾಗಿರಿ ಎಲ್ಲರಿಗೂ ನನ್ನ ನಮಸ್ಕಾರಗಳು ಶರಣು ಶರಣಾರ್ಥಿಗಳು